Posts

Showing posts from August, 2024

ಮಗನ ಮದುವೆ

 (ಇದು ಸಣ್ಣ ಸಂದರ್ಭದ ಕಥೆ , ಹಳ್ಳಿಯಲ್ಲಿ ಬದುಕು ಕಟ್ಟಿಕೊಂಡಿರುವ ನಾಲ್ಕು ಜನ ಇರುವ ಒಂದು ಪುಟ್ಟ ಸಂಸಾರದ ಕಥೆ ಇದು) ಅಕಿ ಎನ್ ಸಾಲಿ ಕಲ್ತಕಿ ಅಲ್ಲಾ ನಾಲ್ಕ ಮಂದ್ಯಾಗ ಜೋರ್ ಮಾತಡದಾಕಿನು ಅಲ್ಲಾ ತಾನ್ ತನ್ನ ಸಂಸಾರ ಅಂತ್ ಇದ್ಲು ಗಂಡನು ತಕ್ಕಮಟ್ಟಿಗೆ ದುಡಿತಿದ್ದ ಚೀಲ ಗೀಲ ಹೊತ್ತು, ಒಂದು ಎಕರೆ ಅಷ್ಟ್ ಹೊಲನು ಇತ್ತು ಸುಗ್ಗಿ ಬಂದಾಗ ಕಾಳು ಕಡಿ ಬೆಳ್ದ ಚೂರು ಮನಿಗೆ ಇಟ್ಕೊಂಡ್ ಉಳ್ದಿದ್ದು ಮಾರಿ ಅಷ್ಟ ಇಷ್ಟಾ ಬಂದಿದ್ರಾಗ ಕೂಡಿ ಇಟ್ಕೊಂಡ್ ಅದರಾಗ ದುಡಿದು ಜೀವನಾ ಸಾಗಸ್ತಿದ್ರು, ಒಬ್ಬ ಮಗ ಒಬ್ಬಕಿನ ಮಗಳ ಇಬ್ರುನೂ ಸರ್ಕಾರಿ ಸಾಲ್ಯಾಗ ಪಿಯುಸಿತನ ಕಲ್ಸ್ಯಾರ ಮುಂದ ಕಲಸಾಕ ಶಕ್ತಿಇಲ್ಲಪಾ ನಂಗ ಮನಿ ಹೊಲ ನೋಡ್ಕೋಂಡ ಹೋಗ್ ನೀನ ಅಂತ ಅಪ್ಪ ಹೇಳಿದ ಮಾತಿಗೆ ಹು ಅಂದಿದ್ದ ಮಗ, ಮಗಳ್ನು ಚಲೋ ಮನಿಗೆ ಕೊಟ್ಟ ಮದವಿ ಮಾಡಿದ್ರು ಅಷ್ಟ ಇಷ್ಟಾ ಕೂಡಿಟ್ಟಿದ್ದ ರೊಕ್ಕಕ್ದಾಗ  ಮಗಳ ಎನ ಕೊಟ್ಟ ಮನಿಗೆ ಹೊದ್ಲು ಅನ್ನುದ್ರಾಗ ಚಿಂತಿ ಹತ್ತಿದ್ ಅವ್ವ ಇನ್ನ ಮಗಗ ಒಂದ್ ಮದುವಿ ಮಾಡಿದ್ರ ಅಪ್ಪ ಅವ್ವ ಆಗಿ ಕರ್ತವ್ಯ ಆತ್ ನೋಡ್ ನಮ್ದು ಅಂತ ಅನ್ಕೊಂಡು ಊರಾಗ ಬಿಗತನಾ ಮಾಡರಕಡೆ ಮಗನ ಬಗ್ಗೆ ಹೊಲ ಮನಿ ಆಸ್ತಿ ಬಗ್ಗೆ ಹೇಳಿ ಇಟ್ಟಿದ್ಲು,  ಇವನರ ಸಾಲಿ ಕಲ್ತಿಲ್ಲ ಒಕ್ಕಲುತನ ಮಾಡವ ಆಸ್ತಿ ಗಿಸ್ತಿನು ಇಲ್ಲ ಕನ್ನೆ ಕೊಡೋರು ವಿಚಾರ ಮಾಡ್ತಾರ ಅಂತ ಚಿಂತ್ಯಾಗ ಇದ್ದಕಿಗೆ ಜಲ್ದಿನ ಕನ್ನೆ ಸಿಕ್ಕ ಮದುವಿನು ನಿಚ್ಚಿ ಆಗುತ್ತ ಅನ್ನುದು ಕನಸೋ ಮನಸ್ದಾಗು ಇದ್ದ...