Posts

Showing posts from May, 2024

ನನ್ನ ಇಷ್ಟದ ಜಾತ್ರೆ

  ಅದು ಬೇಸಿಗೆ ರಜೆ, ನಾನು ನನ್ನ ತಮ್ಮ ಹಾಗೂ ನಮ್ಮ ಚಿಕ್ಕಮ್ಮನ ಇಬ್ಬರು ಮಕ್ಕಳು ಅಂದರೆ ನನ್ನ ತಮ್ಮ ತಂಗಿ ಹಾಯಾಗಿ ಕೂಡಿ ಮಜಾ ಮಾಡುವ ಕಾಲ. ನನ್ನ ತಾಯಂದಿರಿಗೆ ತವರೂರಿನ ಸಂಭ್ರಮ. ನಮ್ಮ ತಾಯಿ ನಮ್ ಜೊತೆ ಎಷ್ಟೆ ಖುಷಿಯಾಗಿದ್ರು ಅವರಿಗೆ ನೆಮ್ಮದಿ ಮನಸ್ಸಿನ ಸಂತೋಷ ಯಾವಾಗಲೂ ತವರು ಮನೆಯಲ್ಲಿನೆ ಸಿಗೋದು. ಅವರಿಗೂ ಅವರ ಸಹೋದರರು ಅಂದರೆ ನಮ್ಮ ಮಾವಂದಿರು ಜೊತೆ ಕೂತು ಹರಟೆ ಹೊಡೆಯುವ ಆಸೆ. ಅವರ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು ಸೋದರ ಸೋದರಿಯರ ಕಾಲೆಳೆದು ಕಿಚಾಯಿಸುತ್ತಾ ಜೋರಾಗಿ ಕಂಬನಿ ಮಿಡಿಯುವವರೆಗು ನಗುವ ಸಂಭ್ರಮ.  ಇನ್ನು ನಮಗೆ ಬೇಸಿಗೆ ಅಂದ್ರೆನೆ ಖುಷಿ ಅದರಲ್ಲೂ ಅಮ್ಮನ ಮನೆ ಖುಷಿಗೆ ಪಾರವೆ ಇಲ್ಲಾ. ಏಪ್ರಿಲ್ ೧೦ ನಮ್ಮ ಫಲಿತಾಂಶ ಬರುವ ದಿನ ಮರುದಿನ ಅಮ್ಮನ ಊರಿನ ಬಸ್ ಹತ್ತುವ ದಿನ  ನನ್ನ ತಾಯಿ ನಮ್ಮ ಬಟ್ಟೆಗಳನ್ನು ಬ್ಯಾಗ್ ಗೆ ಹಾಕಿ ಅದರಲ್ಲೂ ವಿಶೇಷ ಬಟ್ಟೆ ಬೇರೆ ದಿನಾ ತೊಡುವ ಬಟ್ಟೆ ಬೇರೆ, ನಂತರ ತನ್ನ ಒಂದೆರಡು ಸೀರೆ ರವಿಕೆಗಳನ್ನು ಅದರ ಜೊತೆ ಸೇರಿಸುವವಳು. ಇದೆಲ್ಲಾ ತಯಾರಿ ಒಂದೆರಡು ವಾರದ ಮುಂಚೆನೆ ಶುರುವಾದ್ರು ದಡ ಸೇರೋದು ಊರಿಗೆ ಹೊರಡುವ ಹಿಂದಿನ ದಿನವೇ.  ಈ ಕಡೆ ನಾವು ಬಸ್ ಹತ್ತಿದ್ವಿ ಆ ಕಡೆ ನಮ್ ಚಿಕ್ಕಮ್ಮ ತಮ್ಮ ತಂಗಿನೂ ಹತ್ತಿದ್ರು ಉಳಿದವರೆಲ್ಲ ಜಾತ್ರೆ ಹಿಂದಿನ ದಿನ ಬರೋರು ಆದ್ರೆ ನಮಗೆ ಅಮ್ಮನ ಮನೆ ತಿಂಗಳ ಠಿಕಾಣ.  ಊರು ಬಂತು ಬಸ್ ಇಂದ ಇಳಿದು ನಿಂತ್ವಿ ದಾರಿ ಕಾದು ನೋಡುತ್ತಿದ್...