ನನ್ನ ಇಷ್ಟದ ಜಾತ್ರೆ

 ಅದು ಬೇಸಿಗೆ ರಜೆ, ನಾನು ನನ್ನ ತಮ್ಮ ಹಾಗೂ ನಮ್ಮ ಚಿಕ್ಕಮ್ಮನ ಇಬ್ಬರು ಮಕ್ಕಳು ಅಂದರೆ ನನ್ನ ತಮ್ಮ ತಂಗಿ ಹಾಯಾಗಿ ಕೂಡಿ ಮಜಾ ಮಾಡುವ ಕಾಲ.
ನನ್ನ ತಾಯಂದಿರಿಗೆ ತವರೂರಿನ ಸಂಭ್ರಮ.
ನಮ್ಮ ತಾಯಿ ನಮ್ ಜೊತೆ ಎಷ್ಟೆ ಖುಷಿಯಾಗಿದ್ರು ಅವರಿಗೆ ನೆಮ್ಮದಿ ಮನಸ್ಸಿನ ಸಂತೋಷ ಯಾವಾಗಲೂ ತವರು ಮನೆಯಲ್ಲಿನೆ ಸಿಗೋದು.
ಅವರಿಗೂ ಅವರ ಸಹೋದರರು ಅಂದರೆ ನಮ್ಮ ಮಾವಂದಿರು ಜೊತೆ ಕೂತು ಹರಟೆ ಹೊಡೆಯುವ ಆಸೆ. ಅವರ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು ಸೋದರ ಸೋದರಿಯರ ಕಾಲೆಳೆದು ಕಿಚಾಯಿಸುತ್ತಾ ಜೋರಾಗಿ ಕಂಬನಿ ಮಿಡಿಯುವವರೆಗು ನಗುವ ಸಂಭ್ರಮ.
 ಇನ್ನು ನಮಗೆ ಬೇಸಿಗೆ ಅಂದ್ರೆನೆ ಖುಷಿ ಅದರಲ್ಲೂ ಅಮ್ಮನ ಮನೆ ಖುಷಿಗೆ ಪಾರವೆ ಇಲ್ಲಾ.
ಏಪ್ರಿಲ್ ೧೦ ನಮ್ಮ ಫಲಿತಾಂಶ ಬರುವ ದಿನ
ಮರುದಿನ ಅಮ್ಮನ ಊರಿನ ಬಸ್ ಹತ್ತುವ ದಿನ 
ನನ್ನ ತಾಯಿ ನಮ್ಮ ಬಟ್ಟೆಗಳನ್ನು ಬ್ಯಾಗ್ ಗೆ ಹಾಕಿ ಅದರಲ್ಲೂ ವಿಶೇಷ ಬಟ್ಟೆ ಬೇರೆ ದಿನಾ ತೊಡುವ ಬಟ್ಟೆ ಬೇರೆ, ನಂತರ ತನ್ನ ಒಂದೆರಡು ಸೀರೆ ರವಿಕೆಗಳನ್ನು ಅದರ ಜೊತೆ ಸೇರಿಸುವವಳು.
ಇದೆಲ್ಲಾ ತಯಾರಿ ಒಂದೆರಡು ವಾರದ ಮುಂಚೆನೆ ಶುರುವಾದ್ರು ದಡ ಸೇರೋದು ಊರಿಗೆ ಹೊರಡುವ ಹಿಂದಿನ ದಿನವೇ.
 ಈ ಕಡೆ ನಾವು ಬಸ್ ಹತ್ತಿದ್ವಿ ಆ ಕಡೆ ನಮ್ ಚಿಕ್ಕಮ್ಮ ತಮ್ಮ ತಂಗಿನೂ ಹತ್ತಿದ್ರು ಉಳಿದವರೆಲ್ಲ ಜಾತ್ರೆ ಹಿಂದಿನ ದಿನ ಬರೋರು ಆದ್ರೆ ನಮಗೆ ಅಮ್ಮನ ಮನೆ ತಿಂಗಳ ಠಿಕಾಣ.
 ಊರು ಬಂತು ಬಸ್ ಇಂದ ಇಳಿದು ನಿಂತ್ವಿ ದಾರಿ ಕಾದು ನೋಡುತ್ತಿದ್ದ ಅಜ್ಜನ ಮುಖದ ಭಾವನೆನೆ ನೋಡಲು ಸಡಗರ, ಮಗಳು ಮೊಮ್ಮಕ್ಕಳನ್ನು ಕಂಡು ಅಲ್ಲೇ ಆನಂದಬಾಷ್ಪ ಸುರಸೋರು.
 ದಾರಿಯುದ್ದಾ ಹೊಗುತ್ತಾ ನಮ್ಮ ತಾಯಿಯ ತವರೂರಿನ ಬಳಗ ಅದರಲ್ಲೂ ಬಹಳ ಹತ್ತಿರದ ಗೆಳತಿಯರು, ನಡೆಯುತ್ತಾ ನಡೆಯುತ್ತಾ ತಾಯಿಯ ಮಾತು ಅವರು ಕಳೆದ ಆ ಊರಿನ ನೆನಪು ಅವರಿವರ ಪರಿಚಯ ಕೇಳುತ್ತಾ ಮನೆ ಸೇರಿದ್ದೆ  ಗೊತ್ತಾಗಲಿಲ್ಲ.
 ಅಮ್ಮ ನಾವು ಬರುವ ದಾರಿಯನ್ನೇ ಕಾಯುತ್ತಿದ್ದರು ಆಗಲೇ ಮಧ್ಯಾಹ್ನದ ಊಟದ ಸಮಯವಾಗಿತ್ತು, ಮಗಳು ಮೊಮ್ಮಕ್ಕಳನ್ನು ಕಣ್ತುಂಬಿಕೊಡು ಒಲೆ ಮುಂದೆ ಕೂತೆ ಬಿಟ್ಟರು.
 ಬಿಸಿ ಬಿಸಿ ರೊಟ್ಟಿ,ಬೆಣ್ಣೆ ಕೆಂಪು ಮೆಣಸಿನಕಾಯಿ ಚಟ್ನಿ, ಬೇಳೆ ಪಲ್ಯ ಸರ್ಕಾರ ಕೊಡು ರೇಷನ್ ಅಕ್ಕಿ ಅನ್ನ ಅದರ ಜೊತೆ ಮಜ್ಜಿಗೆ ಹಶೆಹಂಬ್ರ ( ಮಜ್ಜಿಗೆಗೆ ಹುಳಿ ಬಿಟ್ಟು ಮಾಡುವ ಸಾರು)‌ ಇದೆಲ್ಲಾ ನಮಗೆ ಎಷ್ಟು ಇಷ್ಟವೋ ಅಷ್ಟೇ ನಮ್ ತಾಯಿಗೆ ಅವರ ತಾಯಿಯ ಕೈ ರುಚಿಯೇ ಇಷ್ಟ.
 ಇತ್ತ ನಮ್ಮ ಊಟದ ಪಣತಿ ಮುಗಿಯುತ್ತ ಬಂದಿತ್ತು ಅತ್ತ ಚಿಕ್ಕಮ್ಮ ತಮ್ಮ ತಂಗಿಯ ಕೂಗು ಕೇಳಿಸಿತು, ಊಟ ಮುಗಿಸಿ ಬಾಗಿಲು ಕಡೆ ಬಂದು ಅವರನ್ನು ಕಂಡು ಖುಷಿಯಲ್ಲಿ ತೇಲಿದೆವು.
 ಆ ಕ್ಷಣಕ್ಕೆ ಅಮ್ಮ ಅಜ್ಜನ ಮುಖದಲ್ಲಿ ಸ್ವರ್ಗವನ್ನೇ ನೋಡಿದ ಸಂತೋಷ, ಅವರ ಆ ಸಡಗರ ನೋಡಲು ಎರಡು ಕಣ್ಣು ಸಾಲದ್ದಾಗಿತ್ತೂ ಅಷ್ಟು ಖುಷಿ ಕೊಡುತ್ತೆ ಮನೆಹೆಣ್ಣುಮಕ್ಕಳ ತವರು ಮನೆಗೆ ಬರೋದು.
ಅಜ್ಜ ಅಮ್ಮ ಸೇರಿ ಎಲ್ಲರದೂ ಊಟ ಆಯಿತು, ಮಧ್ಯಾಹ್ನ ಒಂದು ಗಳಿಗೆ ಮಲಗಿ ಏಳುವುದು ಅಜ್ಜನ ಅಭ್ಯಾಸ ನಮ್ಮನು ಕರೆದುಕೊಂಡು ನಾವು ಅವರ ಕಾಲನ್ನು ಒತ್ತುತ್ತಾ ಮಾತು ಕೇಳಿದೆವು ಅಷ್ಟರಲ್ಲಿ ಅವರು ನಿದ್ದೆಗೆ ಜಾರಿದ್ದರು ಈ ಕಡೆ ತಾಯಿ ಮಕ್ಕಳ ಕಷ್ಟ ಸುಖದ ಮಾತು ಖುಷಿ ಕಂಬನಿ ಮಿಡಿದಿದ್ದವು, 
ನಮ್ಮ ಕಪಿ ಸೇನೆ ಆಗಮನ ಆ ಓಣಿಯ ತುಂಬಾ ಗದ್ದಲ ಮಾಡಿತ್ತು.
ಒಂದೆರಡು ದಿನ ಕಳೆಯಿತು ನಾವು ಅಮ್ಮ ಅಜ್ಜನ ಕಾಳಜಿ ಪ್ರೀತಿಯಲ್ಲಿ ಕಳೆದು ಹೋಗಿಬಿಟ್ಟರುತ್ತಿದ್ದೆವು, ಅಜ್ಜ ಪಾಪಡೆ ತಂದುಕೊಟ್ಟರೆ ಅಮ್ಮ ಸೇರಿಲೆ ಜೋಳ ಕೊಟ್ಟು ಅದರ ಬದಲಾಗಿ ಬರ್ಫ ಕ್ಯಾಂಡಿ ಕೊಡಿಸುವವರು. 
ಆ ದಿನ ಯತಪ್ರಕಾರದ ದಿನಚರಿ ಹಾಗೂ ನಮ್ಮ ದೊಡ್ಡ ಸೋದರಮಾವ ಮತ್ತು ಅವರ ಪರಿವಾರದ ಆಗಮನದ ನಿರೀಕ್ಷೆಯಲ್ಲಿದೆದವು, ಸಂಧ್ಯಾ ಕಾಲ ದನಕರು ಕೊಟ್ಟಿಗೆ ಸೇರಿಕೊಂಡವು ಸೋದರಮಾವ ದಾರಿಕಾಯಿತ್ತಿದ್ದ ನಮಗೂ ಅವರ ಬರುವಿನ ಕೂಗು ಗಡಸು ಧ್ವನಿ ಗುರುತಾಯಿತು.
ಮರುದಿನ ಇನ್ನಿಬ್ಬರ ಹೆಣ್ಣುಮಕ್ಕಳು ಬರುಸಮಯ ಅಜ್ಜ ಅಮ್ಮನ ಮನಸ್ಸಿನ ಸುಖದ ಕಳೆ ಇನ್ನೂ ಹೆಚ್ಚಾಗುವ ವೇಳೆ.
ಇಬ್ಬರು ದೊಡ್ಡಮ್ಮಂದಿರು ಅವರ ಮಕ್ಕಳು ಅಂದರೆ ನನ್ನ ಅಣ್ಣ ಅಕ್ಕಂದಿರು ಬಂದರು, ಮನೆಯ ಆ ಹಬ್ಬ ಜಾತ್ರೆಯ ಕಳೆ ತುಂಬಿತ್ತು
ಇನ್ನು ಒಂದು ದಿನ ಬಾಕಿಯಿತ್ತು ತಾಯಿಯ ತವರೂರಿನ ಬಸವಣ್ಣನ ಜಾತ್ರೆಗೆ ಅದಾಗಲೆ ಊರಿನ ಮನೆ ಮನೆಗಳಲ್ಲಿ ಸಂತೋಷ ಉತ್ಸಾಹ ಕಳೆಗೊಂಡಿತ್ತು, ಮಕ್ಕಳು ಮೊಮ್ಮಕ್ಕಳು ಅಳಿಯಂದಿರು ಸೊಸೆಯಂದಿರು ಅಕ್ಕ ತಂಗಿ ಅಣ್ಣ ತಮ್ಮ ಹೀಗೆ ಎಲ್ಲಾ ಸಂಬಂಧಗಳೂ ಕೂಡಿದ್ದವು ಆಗ ಆ ಊರಿನ ಸಂಭ್ರಮದ ಕಳೆನ ಕಣ್ತುಂಬಿಕೊಳ್ಳವುದೆ ಸಡಗರ. ದೂರದ ಊರಿಗೆ ಕೆಲಸಕ್ಕೆ ಸೇರಿದ ಅಣ್ಣ ಅಕ್ಕ ಅವರ ಬರುವಿಕೆಯೂ ಇನ್ನಷ್ಟು ಮೆರುಗು ನೀಡಿತ್ತು ನಮ್ಮ ಮನೆಗೆ,  ಜಾತ್ರೆಯ ಹಿಂದಿನ ದಿನ ನಮ್ಮ ತಂದೆ, ಕಾಕ ದೊಡ್ಡಪ್ಪಂದಿರರ ಆಗಮನ ಅಮ್ಮ ಅಜ್ಜನಿಗೆ ಅಳಿಯಂದಿರು ಜಾತ್ರೆಗೆ ಬಂದಿರುವ ಸಡಗರ.
  
ಕಳೆದ ಮೂರು ನಾಲ್ಕು ದಿನಗಳನ್ನು ನಮ್ಮ ಚಿಕ್ಕ ಕಪಿ ಸೇನೆ ಎಲ್ಲರನ್ನೂ ಬರಮಾಡಿಕೊಡುವುದರಲ್ಲೇ ತಲ್ಲಿನ, ಈಗ ಯಾರು ಬರುತ್ತಾರೋ ಯಾ ಅಣ್ಣ ಅಕ್ಕ ಬರುತ್ತಾರೋ  ಆ ಕಾಯುವ ಖುಷಿ ಅವರನ್ನು ಮೊದಲು ನಾವು ಮಾತನಾಡಿಸಬೇಕು ಎಂಬ ಆತುರ ಬಹಳ ಖುಷಿ ಕೊಡುವುದು
ಜಾತ್ರೆ ದಿನದ ಕ್ಷಣಗಣನೆ
ಜಾತ್ರೆ ದಿನ ಅಂದರೆ ಬೆಳಿಗ್ಗೆ ಮನೆ ಗಂಡುಮಕ್ಕಳಿಗೆ ಬಹಳ ಕೆಲಸ ಒಂದಿಬ್ಬರು ಎರಡು ಮೂರು ನೀರಿನ ಕೊಡಗಳ ತಂಗೊಂಡು ಬಳಸುವ ನೀರನ್ನು ತಂದು ದೊಡ್ಡ ಟಾಕೆ, ಬ್ಯಾರೆಲ್, ದೋಣಿಗೆ ಹಾಕುವವರು, ಇನ್ನೊಂದು ಇಬ್ಬರು ಕೆರೆಗೆ ಹೋಗಿ ನೀರಿನ ಬಂಡಿ ಸಹಾಯದಿಂದ ಕುಡಿಯುವ ನೀರನ್ನು ತರುವವರು.
ಅಂದಾಜು ೩೦-೪೦ ಜನ ಇರುವ ಮನೆ ಎಲ್ಲರ ಸ್ನಾನ ಆಗಬೇಕು ಗುಡಿಗೆ ಹೋಗುವುದರೊಳಗಾಗಿ, ಇತ್ತ ಅತ್ತೆ ಅಮ್ಮ ದೊಡ್ಡಮ್ಮ ದೇವರ ಎಡೆಗೆ ಗೋದಿ ಮಾದ್ರಿ, ಬದನೆಕಾಯಿ ಪಲ್ಯ, ಶಾಂಡಿಗೆ ಹಪ್ಪಳ ಅನ್ನ ಸಾರು ಮಾಡುವವರು. ಅತ್ತ ನಾವು ಅಕ್ಕ ಅಣ್ಣಂದಿರು ಎಲ್ಲರೂ ಗುಡಿಗೆ ಹೋಗಲು ಕಾತುರ ಸಂಭ್ರಮದಿಂದ ತಯಾರಾಗುತ್ತಿದ್ದೆವು, ನಂತರ ಎಲ್ಲರೂ ಸೇರಿ ಗುಡಿಗೆ ಹೋಗಿ ಬಸವಣ್ಣನಿಗೆ ಎಡೆ ಅರ್ಪಿಸಿ ಕಾಯಿ ಒಡೆಸಿ ಕೊಂಡು ಬರುತ್ತಿದ್ದೆವು.
ಅಷ್ಟರಲ್ಲಿ ಮಧ್ಯಾಹ್ನ ಆಗುವುದು ಅಜ್ಜನಿಂದ ಹಿಡಿದು ಅಣ್ಣನ ವರೆಗು ಎಲ್ಲ ಗಂಡುಮಕ್ಕಳ ಊಟದ ಪಣತಿ ನಮ್ಮ ಕಪಿ ಸೇನೆದು ಆಟವಾಡುತ್ತಾ ಅತ್ತಿಂದಿತ್ತ ಓಡಾಡುವವದರಲ್ಲೆ ಊಟ ಆಗಿಬಿಡುವದು.
ಅಮ್ಮ ಅತ್ತೆ ದೊಡ್ಡಮ್ಮ ಅಕ್ಕಂದಿರು ಎಲ್ಲರೂ ಕೊನೆಗೆ ಊಟ ಮಾಡಿ, ಎಲೆ ಅಡಿಕೆ ಸುಣ್ಣದ ತಟ್ಟೆನ ಬಾಗಿಲು ಕಟ್ಟೆಗೆ ತರುವವರು ಎಲ್ಲರೂ ಸೇರಿ ಎಲೆ ಅಡಿಕೆ ಹಾಕಿಕೊಂಡಾಗ ಒಬ್ಬರು ಮಾತುಗಳು ಆರಂಭವಾಗುವವು ಮಾವನ ಮಗ ಸೊಸೆಯಂದಿರನ್ನು ಚೇಷ್ಟಿಸುವವ ಅಣ್ಣಂದಿರು ಮಾವನ ಮಕ್ಕಳನ್ನು ಚೇಷ್ಟಿಸುವವರು, ಮಾತು ನಗು ಸಂಭ್ರಮ ಸಡಗರ ಹೀಗೆ ಮುಂದುವರೆದಿತ್ತು ಒಬ್ಬರಾಗಿ ಒಬ್ಬರು ನಿದ್ದೆಗೆ ಜಾರಿದರು.
ಒಂದು ಗಳಿಗೆಯ ನಿದ್ದೆಯಷ್ಟೆ ಅದು ಆಮೇಲೆ ಅಜ್ಜ ತಮ್ಮ ಬೆತ್ತಂದಿಂದ ತಿವಿದು ಒಬ್ಬಬ್ಬರನ್ನೇ ಎಬ್ಬಿಸಿ ತೇರು ಎಳೆಯುವ ಹೊತ್ತಾಗಿತ್ತು ಎಳಿ ಎನ್ನೊರು.
ಹೆಣ್ಣು ಮಕ್ಕಳಿಗೆ ಅದರಲ್ಲೂ ತವರೂರಿನ ಸೀರೆ ಹಾಗೂ ಬಂಗಾರ ತೊಡುವ ಆನಂದ, ಆ ಬಣ್ಣ ಈ ಬಣ್ಣದ ಮುಂತಾದ ಸೀರೆ ತಯಾರಾಗಲು ಎರಡು ಗಳಿಗೆ, ಗಂಡುಮಕ್ಕಳೂ ತಯಾರಾಗಿ ಗುಡಿ ಕಡೆಗೆ ನಡೆಯುವವರು, ದೊಡ್ಡ ಮಾವ ತೆರಿಗೆ ಎಸೆಯಲು ಉತ್ತತ್ತಿ ತರುವರು
ನಮ್ಮ ಕಪಿ ಸೇನೆಗೆ ನಮ್ಮ ನಮ್ಮ ತಾಯಿಯರು ಬಿಟ್ಟೆ ಹಾಕಿಸಿ ತಲೆಬಾಚಿ ಚೆಂದ ತಯಾರಾಗಿಸಿ ಹೊರಗೆ ಕಳಿಸುವವರು. ಮಾವ ಜಾತ್ರಗೆಂದೆ ಕೊಡಿಸಿದ ಬಟ್ಟೆ ತೊಡಲು ನಮಗೂ ಖುಷಿ.
ಎಲ್ಲರೂ ತಯಾರಾಗಿ ಗುಡಿ ಕಡೆಗೆ ನಡೆಯುತ್ತಿದ್ದೆವು, ತೆರಿಗೆ ಪೂಜೆ ಮಾಡಿ ದೇವರನ್ನು ಪ್ರಾರ್ಥಿಸಿ ಎಳೆಯುತ್ತಿದ್ದರು ನಾವು ಉತ್ತತ್ತಿ ಎಸೆದು ಕೈ ಮುಗಿದು ತೇರಿನ ಹಿಂದೆ ಹಿಂದೆಯೇ ಹೋಗುತ್ತಿದ್ದೆವು. ದಾರಿಯುದ್ದಾ ತೇರಿಗೆ ಬಿದ್ದು ಕೆಳಗೆ ಬಿದ್ದ ಉತ್ತತ್ತಿ ಆರಿಸುವು ಮಜಾ, ಆ ಗದ್ದಲ ನೂಕುನುಗ್ಗನಲಿಯೆ ಇಡೀ ಊರಿನ ಸಡಗರ ಸಂಭ್ರಮ.
ತೇರು ನಿಂತು ಮರಳಿ ಬರುವ ಸ್ಥಳ ಪಾದಗಟ್ಟಿ ಅಲ್ಲಿ ಪಲ್ಲಕ್ಕಿ ಮೆರವಣಿಗೆ ಆ ಬನ್ನಿ ಮರದ ಸುತ್ತ
ಅಲ್ಲಲ್ಲೆ ಕೂಡು ಕುಟುಂಬ ಕುತೂ ಮಾತನಾಡುವುದು ಬಲೂನ್ ಐಸ್ಕ್ರೀಮ್ ಬೇಕೆನ್ನುವ ನಮ್ ಹಠ ಜೋಕಾಲಿ ತೊಟ್ಟಿಲು ಆಡುವ ಆಸೆ, ತಾಯಿಯರಿಗೆ ಅವರ ಬಾಲ್ಯದ ಗೆಳತಿಯರನ್ನು ಭೇಟಿ ಮಾಡಿ ಮಾತನಾಡಿಸುವ ಆಸೆ. ಆ ಖುಷಿ ಸಡಗರದಿಂದ ಮನೆಗೆ ಹಿಂತಿರುಗುತ್ತಿದ್ದೆವು.

Comments

Popular posts from this blog

ಎಲ್ಲಮ್ಮ ಗುಡ್ಡಕ್ಕ ಸವಾರಿ

ಮಗನ ಮದುವೆ

ಸಣ್ಣ ಕಥೆ ೧ - ಅಪರಿಚಿತರು ಅರ್ಥಮಾಡಿಕೊಂಡಾಗ