ಎಲ್ಲಮ್ಮ ಗುಡ್ಡಕ್ಕ ಸವಾರಿ

 ಬನದ ಹುಣ್ಣಿಮೆ ಸಂಕ್ರಮಣ ಕೂಡೆ ಬಂದಿದ್ ಒಂದು ಕಡೆ ಬಾಳ್ ಛಲೋ ಆತ್

ಪ್ರತಿ ತಿಂಗಳ್ ಹಂಗ ಈ ಸತಿ ನೂ ಹುಣ್ಣಿಮೆಗೆ ಏನಾರ ಸಿಹಿ ಮಾಡಿದ್ರ ಆತ್ ಭರತ್ ಹುಣ್ಣಿಮೆಗೆ ಕಡುಬು ಮಾಡಾಕ ಬರುತ್ತ್ ಅಂತ ಅನ್ಕೊಂಡು ಸುಮ್ ಆಗಿದ್ವಿ , ದೀಡಿರ್ ದಿಗಿಲ್ ಬಂದಂಗ ಊರಾಗಿಂತ ಫೋನ್ ಬಂತ್ 

" ಹಿಂಗ ಟ್ರ್ಯಾಕ್ಟರ್ ತಂಗೊಂಡಾಗಿಂದ ಗುಡ್ಡದಾಗ ಬಿಟ್ಟಿಲ್ಲ 

ಮನಿ ಹೆಣ್ಣದೇವರ ರೇಣುಕಾಎಲ್ಲಮ್ಮ ಅದರಾಗ, ಟ್ರ್ಯಾಕ್ಟರನು ವೈದಿಲ್ಲ ಈ ಸಲ  ಓಣ್ಯಾಗಿನ ಮಂದಿ ಬೀಗರ ಕರಕೊಂಡು ಹೋಗಿ ಜಾತ್ರಿ ಇರುತ್ತ ಹುಣ್ಣಿಮಿ ಮಾಡಿ ಪಡ್ಲಿಗಿ ತುಂಬಿಸಿ ಬರಾಕ ಬರುತ್ತ, ಎಲ್ಲಾರವು ಸ್ವಂತ ಮನಿ ಆಗೇವು ಈಗ ಹೋಗಿ ಬರುಣ ಬರ್ರಿ " ಅಂತ ಕಾಕರ ಹೇಳಿ ಇಟ್ರು.

 

ನಮ್ ಮನ್ಯಾಗ ಶೀಗೀ ಹುಣ್ಣಿಮೆ ಇಂತಾ ಐದು ಹುಣ್ಣಿಮೆಗೆ ಎಲ್ಲಮ್ಮಗ ಒಪ್ಪತ್ ಇರತಾರ, ಈ ಐದು ಹುಣ್ಣಿಮೆಗೆ ಮಂದಿ

ಬಾಳ್ ಗುಡ್ಡಕ್ಕ, ಭರತ್ ಹುಣ್ಣಿಮೆಗೆ ಬರೂ ಮಂದಿ ಜಾಸ್ತಿ ಅದ ಕಡೆ ಹುಣ್ಣಿವಿ ಅಂತ.


ಸಾಮಾನ್ಯವಾಗಿ ಬನದ ಹುಣ್ಣಿವಿ ಇಂತಾ ಬರ್ತಾರ ಜಾತ್ರಿ ಅವಾಗ ಶುರು, ಟ್ರ್ಯಾಕ್ಟರ್ ಗೆ ಕೊಲ್ಲಾರಿ ಕಟ್ಕೊಂಡು ಬರೊರ್, ಎತ್ತಿನಬಂಡಿಗೆ ಕೊಲ್ಲಾರಿ ಕಟ್ಕೊಂಡು, ಕಾಲ್ನಡಿಗಿಲೆ ಬರ್ತಾರ.


ನಮ್ದೂ ಟ್ರ್ಯಾಕ್ಟರ್ ಗೆ ಮಸ್ತಗಿ ಕೊಲ್ಲಾರಿ ಕಟ್ಟಿದ್ರು.

ಮುಂದಿನ ಇಂಜಿನ್ ಗೆ ಲೈಟಿನ್ ಸರ ಗೆಜ್ಜೆ ಕಟ್ಟಿ ಸಿಂಗಾರ ಮಾಡಿದ್ರು, ಹಿಂದಿನ ಟೇಲರ ಗೆ ಕೊಲ್ಲಾರಿ ಕಟ್ಟುದು.

ಕೆಬ್ಬಣದ ದಿಂದಾ ಮಾಡಸಿದ್ದ ಚಟ್ ನ 

ನಟ್ ಬೋಲ್ಟಿಂದ ಗಟ್ಟಿಯಾಗಿ ಹಿಂದಿನ ಟೇಲರ್ ಗೆ

ತಿರುವಿ ಬಿಗಿ ಮಾಡಿದ್ರು.

ಚಟ್ ಸಜ್ಜ ಆಗಿಂದ ಅದರಾಗ ನಡುಕ ಅರ್ಧ ಚಟ್ ತನಾ ಹಲಗಿ ಅಡ್ಡ ಅಡ್ಡ ಹಾಕಿ ಈ ವಸತಿ ಶಾಲೆದಾಗ ಬಂಕರ್ ಬೆಡ್ ಇರುಹಂಗ ಮಾಡಿದ್ರು.

ಆ ಚಟ್ ಗೆ ಮೊದ್ಲು ಒಂದೆರಡು ಹಾಳಿಚೀಲ ಹಾಕಿ ದಪ್ಪ ಹಗ್ಗದಿಂದ ಬಿಗಿದು ಆಮೇಲೆ ಎರಡು ದೊಡ್ಡ ಬಂಕದ ಜಮಖಾನ ಹಾಕಿ ಬಿಡಿ ಬಂದು ಬಸ್ತ್ ಮಾಡಿ ನೆರಳು ಮಾಡಿದ್ರು.


ಆ ಹಲಗಿ ಮ್ಯಾಲೆ ಎಲ್ಲಾ ಸಾಮಾನು, ಹಾಸಿಗೆ ಚಾಪೆ

ದೊಡ್ಡ ದೊಡ್ಡ ಹಾಳಿಚೀಲ ಟೆಂಟ್ ಕಟ್ಟಾಕ(ಅಕ್ಕಿ ಚೀಲದ ಅಂತಾನ ನಾ ಕೂಡಿಸಿ ಇಟ್ಟು ದೊಡ್ಡ ಸೂಜಿಲೆ ಹೊಲಿಸಿದ್ದು) ಗ್ಯಾಸ್ , ಸಿಲಿಂಡರ್ , ಬಿದಿರಿನ ದಪ್ಪ ಕೋಲುಗುಳು ಎಲ್ಲಾ ಇಡಾಕ ಜಾಗ ಆಗಿ ಇಬ್ರು ಮೂರು ಜನಾ ಕೂತ್ಕೋಳು ಅಷ್ಟ ಜಾಗ ಇತ್ತು.


ಕೊಲ್ಲಾರಿ ಸಜ್ಜ ಆದಂಗ ಈ ಕಡೆ

ಕಟಕ್ ರೊಟ್ಟಿ , ಎಳ್ಳು, ಶೇಂಗಾ ಮತ್ತ್ ಎಣ್ಣಿ ಹೋಳಿಗೆ 

ಕರ್ಚಿಕಾಯಿ, ಚಕ್ಕುಲಿ, ನಾಲ್ಕು ತರ ಚಟ್ನಿ ಒಂದೆರೆಡು ದಿನಕ್ಕ ಆಗು ಅಷ್ಟ ಮೊಸರು ಹೆಪ್ಪು ಹಾಕಿದ್ರು,ಹಾಲು, ತುಪ್ಪ

ಆಮೇಲೆ ಅಲ್ಲೆ ಅಡಗಿ ಮಾಡಾಕ ಬೇಕಾಗು ಎಲ್ಲಾ ದಿನಸಿ 

ಅಲ್ಲೆ ಹುಣ್ಣಿಮೆ ಮಾಡು ಕಾರಣ ಇದ್ದಿದಕ ಕಡುಬು ಅಡಗಿ ಮಾಡಬೇಕ್ ಪಡ್ಲಿಗಿ ತುಂಬಸಾಕ ಅಂದ್ರ ಹುಣ್ಣಿಮೆ ದಿನ ಹಬ್ಬದ ಅಡಗಿ ಮಾಡಾಕ ಬೇಕಾಗು ದಿನಸಿ ಎಲ್ಲಾ ಕಟ್ಟಿದ್ರು.

ಇವೆಲ್ಲಾ ಎರಡು ದಿನದಾಗ ಓಣ್ಯಾಗಿನ ಮಂದಿ ಕರಕೊಂಡು ಮಾಡಿ ಇಟ್ಟಿದ್ರು ದೊಡ್ಡಮ್ಮ ಚಿಕ್ಕಮ್ಮ ಎಲ್ಲಾ ಸೇರಿ ದೀಡಿರ್ ಆಗಿ ನಿಶ್ಚಿ ಆಗಿದ್ದಕ ಹೇಳ್ತಾರೆ ಎಲ್ಲಾ ಕೆಲಸ ಅವರಿಗೆ 

ಹಳ್ಳ್ಯಾಗ ಹಿಂಗ ಯಾರಾದರೂ ಮನಿ ಒಳಗ ಸಂಭ್ರಮ ಇರಲಿ ಕಾರ್ಯ ಇರಲಿ ಎಲ್ಲಾ ಒಳಹೊಕ್ಕು ತಮ್ದ ಅನ್ಕೊಂಡು ಮಾಡ್ತಾರ.


ಮನಿಮಂದಿ ಅಷ್ಟ ಇದ್ದಿಲ್ಲ ಓಣ್ಯಾಗಿನ ಮುಂದಿನು ಬರಾತಿದ್ರು ನಮ್ ಜೊತಿ 

ಅವರ ಕಾಕಗುಳು, ಅವ್ವ ಚಿಗವ್ವ,ಮಾವಗುಳು ನಮ್ ಅಜ್ಜ 

ಮನಿ ಅತ್ತಿಗುಳೂ ( ಇವರನ ಬಿಟ್ಟ್ ಹೊದ್ರ ಮೂರನೇ ಮಹಾಯುದ್ಧ ನಿಶ್ಚಿತ ಮನ್ಯಾಗ😂),ಅಣ್ಣಾ ,ತಮ್ಮ ಅಕ್ಕ ತಂಗಿ ಎಲ್ಲಾರೂನು ಕೂಡಿಸಿಕೊಂಡು ಹೊಂಟಿದ್ದು ಖುಷಿ ಸಂತೋಷ ಹೇಳಾಕ ಆಗಲ್ಲ.


ಹೋಗು ಹಿಂದಿನ ದಿನ ರಾತ್ರಿ ಎಲ್ಲಾ ಸಾಮಾನು ಚೀಲ ಬಟ್ಟೆ ಚೀಲ ಇಟ್ಟು ಸಜ್ಜುಗೊಳ್ಸಿದ್ರು, ಮುಂಜಾನೆ ಎಲ್ಲಾ ಕೆಲ್ಸ ಮುಗಿಸಿ ಅವತ್ತು ಒಂದಿನಕ ಆಗು ಅಡಗಿ ಎಲ್ಲಾ ಮಾಡಿ ಬುತ್ತಿ ಗಂಟ ಕಟ್ಟಿದ್ರು.


ಉಧೋ ಉಧೋ ಉಧೋ ಎಲ್ಲಮ್ಮ

ನಿನ್ನಾಲ್ಕ ಉಧೋ


ಅಂತ  ಎಲ್ಲಮ್ಮನ ನೆನೆಸ್ಕೊಂಡು ಟ್ರ್ಯಾಕ್ಟರ್ ಹತ್ತೇ ಬಿಟ್ವಿ, 

ದಾರಿ ಗುಂಟ ಮಾತು ಹರಿಟಿ ನಗದು ತಿನ್ನುದು ಚಾಲುನ ಇತ್ತು ಇನ್ನೇನು ಸವದತ್ತಿ ಸಮೀಪ ಬಂತ್ ಅಂದಾಗ 

ಎಲ್ಲವ್ವನ ಭಕ್ತರು ದಾರಿ ಪೂರ್ತಿ ಕಾಣಕತ್ರು ಅದರಾಗ ಸಾಲು ಸಾಲು ಎತ್ತಿನ ಬಂಡಿ ಕಟ್ಟಿಕೊಂಡು ಬಂದೋರು, ಕಾಲ್ನಡಿಗೆದಾಗ ಬರೋರು ಆ ಎತ್ತ್ ಕಟ್ಕೊಂಡು ಬರೋ ನೋಡ್ದಾಗ ಎತ್ತು ದಣಿವಾಗಿದ್ದ ನೋಡಿ ಜೀವ ಮಾರಾಮಾರಿ ಅಂತ್

ಹೀಗೆ ನಮ್ ದಾರಿ ಸಾಗಿತ್ತು ಸವದತ್ತಿ ಬಂದು ಬಿಡ್ತ್.


ಸ್ವಲ್ಪ ಖಾಲಿ ಸ್ವಚ್ಛ ಇದು ಜಾಗದ ಕಡೆ ಟ್ರ್ಯಾಕ್ಟರ್ ನಿಲ್ಲ್ಸಿದ್ರು

ಅದರಾಗ ಊರಾನರ ಊರಾನರ ಒಂದು ಕಡೆ ಆಗ್ಲಿ ಅಂತ

ಟ್ರ್ಯಾಕ್ಟರ್ ಟೇಲರ್ ಮತ್ತು ಮುಂದಿನ ಇಂಜಿನ್ ಬ್ಯಾರೆ ಮಾಡಿ ಅದು ಬಾಜು ನಿಲ್ಲಿಸಿ ನಡುಕ ಪಡಸಾಲಿ ಅಷ್ಟ ಜಾಗ ಬಿಟ್ಟ್ ಆ ಕಡೆ ಈ ಕಡೆ ದೊಡ್ಡ ಹಗ್ಗ ದಿಂದ ತಾಡಪೋಲ್ ಹಾಕಿ ನೆರಳು ಆಗಂಗ ಮಾಡಿದ್ರು ಅದು ನಮ್ ಮನಿ ಆಗಿತ್ತ್ ನಾಲ್ಕ ದಿನಾ ಅಡಗಿ ಮಾಡಾಕ ಊಟಕ್ಕ ಪಡ್ಲಿಗಿ ತುಂಬಸಾಕ ಅಂತ


ಹೋಗಿದ್ದ ದಿನ ಮನ್ಯಾನ ಬುತ್ತಿ ತಿಂದ್ವಿ ಮಾರನೇ ದಿನ ಸವದತ್ತಿ ಅಡ್ಯಾಡಿದ್ವಿ ಭಂಡಾರ ದಾಗ ಮುಣುಗಿ ಎದ್ದಿದ್ವಿ ಎಲ್ಲಾರು , ಅದರ ಮರುದಿನನ ಹುಣ್ಣಿಮಿ ಇತ್ತ್ ಅವ್ವ ಚಿಗವ್ವ ದೊಡ್ಡವ್ವರು ೩ ೪ ಕ್ಕ ಎದ್ದು ಮಡಿಲೇ ಎಲ್ಲವ್ವನ ಪಡ್ಲಿಗಿಗೆ ಬ್ಯಾಳಿ ಗೆ ಹಾಕಿ ಕಡುಬು ಮಾಡಿ ಮತ್ತ ಎಡಿಗೆ ಮಾಡು ಅಡಗಿ ಎಲ್ಲಾ ಮಾಡಿದ್ರು


ನಮ್ಮನ್ನ ಒಂದ್ ೬ ಕ್ಕ ಎಬ್ಬಿಸಿದ್ರು, ಬಡ ಬಡ ಎಲ್ಲಾರ್ದು ಜಳಕ ಜಪತ್ರಿ ಆತ್ ಕಾಕರ ಹೋಗಿ ಪಡ್ಲಿಗಿ ತುಂಬಸಾಕ ಜೋಗಪ್ಪನ ಕರಕೊಂಡ ಬಂದ್ರು, ಅವರ್ ಜೋಗಪ್ಪನರು ಹುಣ್ಣಿಮಿ ದಿನ ಕೈಗೆ ಸಿಗಲ್ಲ ಅಷ್ಟ್ ಒಡ್ಯಾಡ್ತಿರ್ತಾರ ಎಲ್ಲಾರು ಪಡ್ಲಿಗಿ ತುಂಬಸರು ಮತ್ತ ಬಾಳಾ ಗದ್ದಲದಾಗ ಇರತಾರ ಆವರನ ಹುಡುಕಿಕ್ಕೊಂಡು ಕರಕೊಂಡ ಬಂದ ಪಡ್ಲಿಗಿ ತುಂಬಿಸಿ ಬಿಟ್ರ ಸೆರ್ವಿ ಅಂತ ಎಲ್ಲಾ ಮನಿ ಅವರು ಬಡ ಬಡ 

ಎದ್ದು ಅಡಿಗೆ ಪೂಜೆ ಮಾಡಿರ್ತಾರ

ಇನ್ನು ಪಡ್ಲಿಗಿ ಅಂದ್ರ ಬಿದಿರಿನ ಪುಟ್ಟ್ಯಾಗ ಜೋಳ ಅಕ್ಕಿ ಉಳ್ಳಾಗಡ್ಡಿ ಬಳ್ಳುಳ್ಳಿ ಬದನೆಕಾಯಿ ಕಡುಬು ಎಡಿ ಎಲ್ಲಾ ಹಾಕಿ ಆಂತಾವ ಮನಿಗೆ ಎರಡು ಎರಡು ಪುಟ್ಟಿ ಮಾಡಿರತಾರ ಅದರಾಗ ಜೋಗಪ್ಪ ಬಂದು ಪದ ಹಾಡಿ ಪೂಜೆ ಮಾಡಿ ಒಂದ್ ತಾ ತಗೊಂಡು ಒಂದು ನಮಗೆ ವಾಪಸ್ ಕೊಡತಾರ,

ನಮಗ ಕೊಟ್ಟಿದ್ ಪಡ್ಲಿಗಿನ ಮನಿಗೆ ತಂದ ಪರುಶುರಾಮ ನಾ ಕಳಿಸಿ. ಹೊಂದಿದಾಗ ಇಲ್ಲಾ ಮನಿ ಅಂಕಗಳೊಂದಿಗೆ ಮುಗುಚಿ ಬಿಡಬೇಕ್

ಪರುಶುರಾಮನ ಕಳಸುತನ ಮೈಲಿಗೆ ಹಂಗ ಇರಬೇಕ್.


ಹುಣ್ಣಿಮಿ ದಿನ ಪಡ್ಲಿಗಿ ತುಂಬಿಸಿ ನಾಷ್ಟ ಮಾಡಿ ಒಂದ್ ಜಂಪ್ ನಿದ್ದಿ ಮಾಡಿ ಎದ್ರು ಹೆಣ್ಣುಮಕ್ಕಳ್ ಎಲ್ಲಾರು

ಆಮೇಲೆ ಮತ್ತ ಗಂಡುಮಕ್ಕಳು ಹಿರಿಯರು ಎಲ್ಲಾ ಹಬ್ಬದ ಊಟ ಮಾಡಿ ಮಸ್ತ ಎಲಿ ಅಡಿಕೆ ಸುಣ್ಣ ಹಾಕ್ಕೊಂಡು ತಿರಗ್ಯಾಡಾಕ ಹೋದ್ರು ನಾವೆಲ್ಲಾ ಆಮೇಲೆ ಊಟ

ಮಾಡಿ ತೊಳುದು ಬಳುದು ಎಲ್ಲವ್ವನ ದರ್ಶನಕ್ಕ ಹೋದ್ವಿ ಮಧ್ಯಾಹ್ನ ಅಷ್ಟೇ ಗದ್ಲ ಇರಲ್ಲ ಅಂತ ಅಲ್ಲೇ ನೋಡಿದ್ರ ತುಂಬಿದ್ರು ಮಂದಿ ಖಂಡಾಪಟಿ ಮಂದಿ ಮದ್ಲ ಹುಣ್ಣಿಮೆ 

ಅದರಾಗ , ೩ ತಾಸ್ ಆತ್ ದರ್ಶನ ಮುಗಿಸಿಕೊಂಡ ಬರಾಕ

ಹೊರಗೆ ಬಂದು ಪಳಾರ ತಗೊಂಡ್ವಿ ಮನಿಗೆ ಮತ್ತ್ ಒತ್ತಾಗಿ ಎಲ್ಲಾರುಗು ಕೊಡಾಕ ಅದು ಆದಮೇಲೆ ಎಲ್ಲಾರುಗು ಇಷ್ಟಾ ಆಗು ಅಂತಾದ ಜಾತ್ರಿ ಮಾಡಾಕ ಹೋದ್ವಿ


ನಾವು ಮನಿ ಹೆಣ್ಮಕ್ಕಳು ಬಳಿ ತಗೊಂಡ್ವಿ ಕೈಗೆ ಇಡಿಸಿಕೊಂಡ್ರು ನಾವ್ ಕೈಯಾಗ ತಗೊಂಡ್ವಿ ಗಾಜನ್ನು ಚಿಕ್ಕಿ ಬಳಿ ಎನ್ ಚಂದ ಇದ್ವಿ ಅಂದ್ರ ಒಂದಕ್ಕಿಂತ ಒಂದ್ ಬಲ ಅಷ್ಟ ಚಂದ ಜಾತ್ರಿ ಮಾಡುವುದು ರಾತ್ರಿ ತನ, ನಮ್ದು ಗುಡಾರಕ್ಕ ಬಂದ್ ಊಟ ಮಾಡಿ ಒಂದ್ ಸುತ್ತ ಪಂಟ್ ಹೊಡುದ್ವಿ

ಮರುದಿನ ಸಂಕ್ರಮಣ ಇತ್ತು ಅಲ್ಲೇ ಪರಸಗಡ ಅಂದ್ರ ಪರುಶುರಾಮ ಇದ್ದ ಸ್ಥಳ ಅಲ್ಲಿಗೆ ಹೋಗಿ ಸಂಕ್ರಮಣ ಮಾಡಿ ಬಂದ್ವಿ ಮಸ್ತ್ ಕೋಟೆ ಐತಿ ಅದು

ಬಂದು ಎಲ್ಲಾ ಸಾಮಾನ ಕಟ್ಕೊಂಡು ನಮ್ ಗುಡಾರ ಬಿಚ್ಚಿ ಟ್ರ್ಯಾಕ್ಟರ್ ಗೆ ಕೊಲ್ಲಿರಿ ಕಟ್ಟಿದ್ರು ವಾಪಸ್ ಗುಡಾರ ನಾಲ್ಕು ದಿನ ಮನಿ ಆಗಿಬಿಟ್ಟಿತ್ತ್ ಬಿಟ್ಟಬರಾಕ ಮನಸ್ ಇದ್ದಿಲ್ಲ

ಮತ್ತ್ ಮುಂದಿನ ವರ್ಷ ಬರ್ತೀವಿ ವಾ ಎಲ್ಲವ್ವ ಅನ್ಕೋತ ಟ್ರ್ಯಾಕ್ಟರ್ ಹತ್ತಿ 

ಉಧೋ ಉಧೋ ಉಧೋ ಎಲ್ಲಮ್ಮ ನಿನ್ನಾಲ್ಕ ಉಧೋ ಉಧೋ ಉಧೋ

ಅಂತ ಸವದತ್ತಿ ದಾಟುತನ ಅಂದ್ ಊರ ಕುಂಡಿ ದಾರಿ ಹಿಡಿದಿದ್ವಿ.


ಹಿಂಗ ಇತ್ತ ನೋಡ್ರಿ ನಮ್ದ ಗುಡ್ಡಕ್ಕ ಸವಾರಿ.


Comments

Popular posts from this blog

ಮಗನ ಮದುವೆ

ಸಣ್ಣ ಕಥೆ ೧ - ಅಪರಿಚಿತರು ಅರ್ಥಮಾಡಿಕೊಂಡಾಗ