ಸಣ್ಣ ಕಥೆ ೧ - ಅಪರಿಚಿತರು ಅರ್ಥಮಾಡಿಕೊಂಡಾಗ

 90ರ ದಶಕದ ಆಸುಪಾಸಿನ ಸಣ್ಣ ಸಂದರ್ಭ:

ಸುಲೋಚನಾ ಗಾರ್ಮೆಂಟ್ ನಲ್ಲಿ ಕೆಲಸ ಮಾಡುವ ಸ್ವಾವಲಂಬಿ ಮಹಿಳೆ, ದಿನಾಲೂ ಸರ್ಕಾರಿ ಬಸ್ ನಲ್ಲಿ ಊಟದ ಡಬ್ಬಿ ಜೊತೆ ಬರುವವಳು.

ಅದು ಮುಂಗಾರಿನ ಕಾಲ ಜಿಟಿ ಜಿಟಿ ಮಳೆ, ಸುಲೋಚನಾಳ ಕೊಡೆ ಸರಳವಾಗಿ ಬಿಚ್ಚುತ್ತಿರಲಿಲ್ಲ, ಅದರ ಜೊತೆ ಸೆಣಸಾಟ ನಡೆಸಿದ್ದಾಗ..

ಬಸ್ ನಿಲ್ದಾಣದ ಎದುರಿನ ಚಹಾದ ಅಂಗಡಿಯ ಟೇಪ್ ರೆಕಾರ್ಡರ್ ನಲ್ಲಿ ಹಾಡು ಪ್ರಸಾರಿಸುತ್ತಿತ್ತು ಗೆಳೆಯರೊಂದಿಗೆ ಚಹಾ ಕುಡಿಯುತ್ತಾ ಅಲ್ಲೇ ನಿಂತಿದ್ದ ಪ್ರಕಾಶ್ ಸ್ವಲ್ಪ ಜೋರು ವ್ಯಕ್ತಿ, ಮ್ರೃದು ಮನಸ್ಸು ಸದಾ ಸ್ನೇಹ ಬಯಸುವ ಜೀವ.


ಉದ್ದ ಹೆಣೆದಿರುವ ಜಡೆ, ಮಧ್ಯೆ ಬೈತಲೆ, ಅಗಲವಾದ ಕೆಂಪು ಬೊಟ್ಟು, ನೀಳ ರವಿಕೆ, ಖಾದಿ ಸೀರೆ ಜೊತೆಗೆ ಕವಿಗಳ ಚೀಲ, ಕೊಡೆ ಹಿಡಿದು ಬಸ್ ಗಾಗಿ ಕಾಯುತ್ತಾ ನಿಂತಿದ್ದ ಸುಲೋಚನಾ ಪ್ರಕಾಶ್ ಕಣ್ಣಿಗೆ ಬಿದ್ದಳು

 

ರಸ್ತೆ ದಾಟಿ ಬಂದ ಪ್ರಕಾಶ್ ನಿಮ್ಮ ಹೆಸರು ಏನೆಂದು ಕೇಳಿ ಅವಳ ಜೊತೆ ಸಂಭಾಷಣೆಗೆ ಪ್ರಯತ್ನಿಸಿದ ಆದರೆ ವ್ಯರ್ಥ ವಾಯಿತು

 ಸುಲೋಚನಾಳ ಸರಳ ಸ್ವಭಾವ ಸ್ವಾವಲಂಬತೆ ಹಾಗೂ ಮುಗ್ದತೆ ಪ್ರಕಾಶ್ ನ ಸೆಳೆದಿತ್ತು, ಆ ಕ್ಷಣವೇ ಅವಳ ಜೊತೆಗಿನ ಸ್ನೇಹಕ್ಕಾಗಿ ಬಯಸುತ್ತಿದ್ದ 


*ಬಹುಶಃ ಒಂದಿಷ್ಟು ಸ್ನೇಹಬಂದ ಮೌನದಿಂದ

ಶುರುವಾಗಿ ನಂತರ ಗಟ್ಟಿಯಾಗುತ್ತವೆ*.


ಮರುದಿನ ಅದೇ ಸಂದರ್ಭ ಅದೇ ಮಾತು, ಮೌನ.

ಮಾರನೆ ದಿನ ಅದೇ ಸಂದರ್ಭ ಆದರೆ ಸುಲೋಚನಾಳೇ ಪ್ರಕಾಶ್ ನನ್ನ ಕರೆದು ತನ್ನ ಹೆಸರಿನಿಂದಲೇ ಪರಿಚಯ ಮಾಡಿಕೊಂಡಳು ಕಾರಣ ಅವಳ ಮನಸ್ಸಿಗೂ ಅನಿಸಿತ್ತು ಪ್ರಕಾಶ್ ಸ್ನೇಹಕ್ಕಾಗಿ ತನ್ನ ಹತ್ತಿರ ಬಂದಿದ್ದು ಎಂದು

ಅಂದು ಮೌನ ಮಾತಾಡಿದ್ದು ಕೇಳಿ ಪ್ರಕಾಶ್ ಮನಸ್ಸಿಗೆ ಸಮಾಧಾನ ಸಿಕ್ಕಿತು.


ಚಹಾಕ್ಕೆ ಪ್ರಕಾಶ್ ಕರೆದಾಗ ಮೊದಲು ನಿರಾಕರಸಿದ ಸುಲೋಚನಾ ಸ್ವಲ್ಪ ಇರಸು ಮುರಿಸು ಅನ್ನಿಸಿದರು ಹೋದಳು

ಬೆಳೆಯಿತು ಗಟ್ಟಿಯಾದ ಗೆಳೆತನ ಪ್ರಕಾಶ್ ಹೊಸ ಕೊಡೆ ತಂದು ಕೊಟ್ಟಾಗ, ಅವಳು ದೇವರ ದರ್ಶನದ ಆಶೀರ್ವಾದದ ದಾರ ಕಟ್ಟಿದಾಗ

ಸರಳ ನಿಷ್ಕಲ್ಮಶ ಸ್ನೇಹ ಶುರುವಾಗಿದ್ದು ಸುಲೋಚನಾಳ ಮೌನ ಮತ್ತು ಪ್ರಕಾಶ್ ನ ಸತತ ಸ್ನೇಹಕ್ಕಾಗಿ ಹಪಾಹಪಿಸುವ ಭಾವದಿಂದ

Comments

Popular posts from this blog

ಎಲ್ಲಮ್ಮ ಗುಡ್ಡಕ್ಕ ಸವಾರಿ

ಮಗನ ಮದುವೆ