Posts

Showing posts from August, 2025

ಎಲ್ಲಮ್ಮ ಗುಡ್ಡಕ್ಕ ಸವಾರಿ

  ಬನದ ಹುಣ್ಣಿಮೆ ಸಂಕ್ರಮಣ ಕೂಡೆ ಬಂದಿದ್ ಒಂದು ಕಡೆ ಬಾಳ್ ಛಲೋ ಆತ್ ಪ್ರತಿ ತಿಂಗಳ್ ಹಂಗ ಈ ಸತಿ ನೂ ಹುಣ್ಣಿಮೆಗೆ ಏನಾರ ಸಿಹಿ ಮಾಡಿದ್ರ ಆತ್ ಭರತ್ ಹುಣ್ಣಿಮೆಗೆ ಕಡುಬು ಮಾಡಾಕ ಬರುತ್ತ್ ಅಂತ ಅನ್ಕೊಂಡು ಸುಮ್ ಆಗಿದ್ವಿ , ದೀಡಿರ್ ದಿಗಿಲ್ ಬಂದಂಗ ಊರಾಗಿಂತ ಫೋನ್ ಬಂತ್  " ಹಿಂಗ ಟ್ರ್ಯಾಕ್ಟರ್ ತಂಗೊಂಡಾಗಿಂದ ಗುಡ್ಡದಾಗ ಬಿಟ್ಟಿಲ್ಲ  ಮನಿ ಹೆಣ್ಣದೇವರ ರೇಣುಕಾಎಲ್ಲಮ್ಮ ಅದರಾಗ, ಟ್ರ್ಯಾಕ್ಟರನು ವೈದಿಲ್ಲ ಈ ಸಲ  ಓಣ್ಯಾಗಿನ ಮಂದಿ ಬೀಗರ ಕರಕೊಂಡು ಹೋಗಿ ಜಾತ್ರಿ ಇರುತ್ತ ಹುಣ್ಣಿಮಿ ಮಾಡಿ ಪಡ್ಲಿಗಿ ತುಂಬಿಸಿ ಬರಾಕ ಬರುತ್ತ, ಎಲ್ಲಾರವು ಸ್ವಂತ ಮನಿ ಆಗೇವು ಈಗ ಹೋಗಿ ಬರುಣ ಬರ್ರಿ " ಅಂತ ಕಾಕರ ಹೇಳಿ ಇಟ್ರು.   ನಮ್ ಮನ್ಯಾಗ ಶೀಗೀ ಹುಣ್ಣಿಮೆ ಇಂತಾ ಐದು ಹುಣ್ಣಿಮೆಗೆ ಎಲ್ಲಮ್ಮಗ ಒಪ್ಪತ್ ಇರತಾರ, ಈ ಐದು ಹುಣ್ಣಿಮೆಗೆ ಮಂದಿ ಬಾಳ್ ಗುಡ್ಡಕ್ಕ, ಭರತ್ ಹುಣ್ಣಿಮೆಗೆ ಬರೂ ಮಂದಿ ಜಾಸ್ತಿ ಅದ ಕಡೆ ಹುಣ್ಣಿವಿ ಅಂತ. ಸಾಮಾನ್ಯವಾಗಿ ಬನದ ಹುಣ್ಣಿವಿ ಇಂತಾ ಬರ್ತಾರ ಜಾತ್ರಿ ಅವಾಗ ಶುರು, ಟ್ರ್ಯಾಕ್ಟರ್ ಗೆ ಕೊಲ್ಲಾರಿ ಕಟ್ಕೊಂಡು ಬರೊರ್, ಎತ್ತಿನಬಂಡಿಗೆ ಕೊಲ್ಲಾರಿ ಕಟ್ಕೊಂಡು, ಕಾಲ್ನಡಿಗಿಲೆ ಬರ್ತಾರ. ನಮ್ದೂ ಟ್ರ್ಯಾಕ್ಟರ್ ಗೆ ಮಸ್ತಗಿ ಕೊಲ್ಲಾರಿ ಕಟ್ಟಿದ್ರು. ಮುಂದಿನ ಇಂಜಿನ್ ಗೆ ಲೈಟಿನ್ ಸರ ಗೆಜ್ಜೆ ಕಟ್ಟಿ ಸಿಂಗಾರ ಮಾಡಿದ್ರು, ಹಿಂದಿನ ಟೇಲರ ಗೆ ಕೊಲ್ಲಾರಿ ಕಟ್ಟುದು. ಕೆಬ್ಬಣದ ದಿಂದಾ ಮಾಡಸಿದ್ದ ಚಟ್ ನ  ನಟ್ ಬೋಲ್...