Posts

ಎಲ್ಲಮ್ಮ ಗುಡ್ಡಕ್ಕ ಸವಾರಿ

  ಬನದ ಹುಣ್ಣಿಮೆ ಸಂಕ್ರಮಣ ಕೂಡೆ ಬಂದಿದ್ ಒಂದು ಕಡೆ ಬಾಳ್ ಛಲೋ ಆತ್ ಪ್ರತಿ ತಿಂಗಳ್ ಹಂಗ ಈ ಸತಿ ನೂ ಹುಣ್ಣಿಮೆಗೆ ಏನಾರ ಸಿಹಿ ಮಾಡಿದ್ರ ಆತ್ ಭರತ್ ಹುಣ್ಣಿಮೆಗೆ ಕಡುಬು ಮಾಡಾಕ ಬರುತ್ತ್ ಅಂತ ಅನ್ಕೊಂಡು ಸುಮ್ ಆಗಿದ್ವಿ , ದೀಡಿರ್ ದಿಗಿಲ್ ಬಂದಂಗ ಊರಾಗಿಂತ ಫೋನ್ ಬಂತ್  " ಹಿಂಗ ಟ್ರ್ಯಾಕ್ಟರ್ ತಂಗೊಂಡಾಗಿಂದ ಗುಡ್ಡದಾಗ ಬಿಟ್ಟಿಲ್ಲ  ಮನಿ ಹೆಣ್ಣದೇವರ ರೇಣುಕಾಎಲ್ಲಮ್ಮ ಅದರಾಗ, ಟ್ರ್ಯಾಕ್ಟರನು ವೈದಿಲ್ಲ ಈ ಸಲ  ಓಣ್ಯಾಗಿನ ಮಂದಿ ಬೀಗರ ಕರಕೊಂಡು ಹೋಗಿ ಜಾತ್ರಿ ಇರುತ್ತ ಹುಣ್ಣಿಮಿ ಮಾಡಿ ಪಡ್ಲಿಗಿ ತುಂಬಿಸಿ ಬರಾಕ ಬರುತ್ತ, ಎಲ್ಲಾರವು ಸ್ವಂತ ಮನಿ ಆಗೇವು ಈಗ ಹೋಗಿ ಬರುಣ ಬರ್ರಿ " ಅಂತ ಕಾಕರ ಹೇಳಿ ಇಟ್ರು.   ನಮ್ ಮನ್ಯಾಗ ಶೀಗೀ ಹುಣ್ಣಿಮೆ ಇಂತಾ ಐದು ಹುಣ್ಣಿಮೆಗೆ ಎಲ್ಲಮ್ಮಗ ಒಪ್ಪತ್ ಇರತಾರ, ಈ ಐದು ಹುಣ್ಣಿಮೆಗೆ ಮಂದಿ ಬಾಳ್ ಗುಡ್ಡಕ್ಕ, ಭರತ್ ಹುಣ್ಣಿಮೆಗೆ ಬರೂ ಮಂದಿ ಜಾಸ್ತಿ ಅದ ಕಡೆ ಹುಣ್ಣಿವಿ ಅಂತ. ಸಾಮಾನ್ಯವಾಗಿ ಬನದ ಹುಣ್ಣಿವಿ ಇಂತಾ ಬರ್ತಾರ ಜಾತ್ರಿ ಅವಾಗ ಶುರು, ಟ್ರ್ಯಾಕ್ಟರ್ ಗೆ ಕೊಲ್ಲಾರಿ ಕಟ್ಕೊಂಡು ಬರೊರ್, ಎತ್ತಿನಬಂಡಿಗೆ ಕೊಲ್ಲಾರಿ ಕಟ್ಕೊಂಡು, ಕಾಲ್ನಡಿಗಿಲೆ ಬರ್ತಾರ. ನಮ್ದೂ ಟ್ರ್ಯಾಕ್ಟರ್ ಗೆ ಮಸ್ತಗಿ ಕೊಲ್ಲಾರಿ ಕಟ್ಟಿದ್ರು. ಮುಂದಿನ ಇಂಜಿನ್ ಗೆ ಲೈಟಿನ್ ಸರ ಗೆಜ್ಜೆ ಕಟ್ಟಿ ಸಿಂಗಾರ ಮಾಡಿದ್ರು, ಹಿಂದಿನ ಟೇಲರ ಗೆ ಕೊಲ್ಲಾರಿ ಕಟ್ಟುದು. ಕೆಬ್ಬಣದ ದಿಂದಾ ಮಾಡಸಿದ್ದ ಚಟ್ ನ  ನಟ್ ಬೋಲ್...

ಮಗನ ಮದುವೆ

 (ಇದು ಸಣ್ಣ ಸಂದರ್ಭದ ಕಥೆ , ಹಳ್ಳಿಯಲ್ಲಿ ಬದುಕು ಕಟ್ಟಿಕೊಂಡಿರುವ ನಾಲ್ಕು ಜನ ಇರುವ ಒಂದು ಪುಟ್ಟ ಸಂಸಾರದ ಕಥೆ ಇದು) ಅಕಿ ಎನ್ ಸಾಲಿ ಕಲ್ತಕಿ ಅಲ್ಲಾ ನಾಲ್ಕ ಮಂದ್ಯಾಗ ಜೋರ್ ಮಾತಡದಾಕಿನು ಅಲ್ಲಾ ತಾನ್ ತನ್ನ ಸಂಸಾರ ಅಂತ್ ಇದ್ಲು ಗಂಡನು ತಕ್ಕಮಟ್ಟಿಗೆ ದುಡಿತಿದ್ದ ಚೀಲ ಗೀಲ ಹೊತ್ತು, ಒಂದು ಎಕರೆ ಅಷ್ಟ್ ಹೊಲನು ಇತ್ತು ಸುಗ್ಗಿ ಬಂದಾಗ ಕಾಳು ಕಡಿ ಬೆಳ್ದ ಚೂರು ಮನಿಗೆ ಇಟ್ಕೊಂಡ್ ಉಳ್ದಿದ್ದು ಮಾರಿ ಅಷ್ಟ ಇಷ್ಟಾ ಬಂದಿದ್ರಾಗ ಕೂಡಿ ಇಟ್ಕೊಂಡ್ ಅದರಾಗ ದುಡಿದು ಜೀವನಾ ಸಾಗಸ್ತಿದ್ರು, ಒಬ್ಬ ಮಗ ಒಬ್ಬಕಿನ ಮಗಳ ಇಬ್ರುನೂ ಸರ್ಕಾರಿ ಸಾಲ್ಯಾಗ ಪಿಯುಸಿತನ ಕಲ್ಸ್ಯಾರ ಮುಂದ ಕಲಸಾಕ ಶಕ್ತಿಇಲ್ಲಪಾ ನಂಗ ಮನಿ ಹೊಲ ನೋಡ್ಕೋಂಡ ಹೋಗ್ ನೀನ ಅಂತ ಅಪ್ಪ ಹೇಳಿದ ಮಾತಿಗೆ ಹು ಅಂದಿದ್ದ ಮಗ, ಮಗಳ್ನು ಚಲೋ ಮನಿಗೆ ಕೊಟ್ಟ ಮದವಿ ಮಾಡಿದ್ರು ಅಷ್ಟ ಇಷ್ಟಾ ಕೂಡಿಟ್ಟಿದ್ದ ರೊಕ್ಕಕ್ದಾಗ  ಮಗಳ ಎನ ಕೊಟ್ಟ ಮನಿಗೆ ಹೊದ್ಲು ಅನ್ನುದ್ರಾಗ ಚಿಂತಿ ಹತ್ತಿದ್ ಅವ್ವ ಇನ್ನ ಮಗಗ ಒಂದ್ ಮದುವಿ ಮಾಡಿದ್ರ ಅಪ್ಪ ಅವ್ವ ಆಗಿ ಕರ್ತವ್ಯ ಆತ್ ನೋಡ್ ನಮ್ದು ಅಂತ ಅನ್ಕೊಂಡು ಊರಾಗ ಬಿಗತನಾ ಮಾಡರಕಡೆ ಮಗನ ಬಗ್ಗೆ ಹೊಲ ಮನಿ ಆಸ್ತಿ ಬಗ್ಗೆ ಹೇಳಿ ಇಟ್ಟಿದ್ಲು,  ಇವನರ ಸಾಲಿ ಕಲ್ತಿಲ್ಲ ಒಕ್ಕಲುತನ ಮಾಡವ ಆಸ್ತಿ ಗಿಸ್ತಿನು ಇಲ್ಲ ಕನ್ನೆ ಕೊಡೋರು ವಿಚಾರ ಮಾಡ್ತಾರ ಅಂತ ಚಿಂತ್ಯಾಗ ಇದ್ದಕಿಗೆ ಜಲ್ದಿನ ಕನ್ನೆ ಸಿಕ್ಕ ಮದುವಿನು ನಿಚ್ಚಿ ಆಗುತ್ತ ಅನ್ನುದು ಕನಸೋ ಮನಸ್ದಾಗು ಇದ್ದ...

ನನ್ನ ಇಷ್ಟದ ಜಾತ್ರೆ

  ಅದು ಬೇಸಿಗೆ ರಜೆ, ನಾನು ನನ್ನ ತಮ್ಮ ಹಾಗೂ ನಮ್ಮ ಚಿಕ್ಕಮ್ಮನ ಇಬ್ಬರು ಮಕ್ಕಳು ಅಂದರೆ ನನ್ನ ತಮ್ಮ ತಂಗಿ ಹಾಯಾಗಿ ಕೂಡಿ ಮಜಾ ಮಾಡುವ ಕಾಲ. ನನ್ನ ತಾಯಂದಿರಿಗೆ ತವರೂರಿನ ಸಂಭ್ರಮ. ನಮ್ಮ ತಾಯಿ ನಮ್ ಜೊತೆ ಎಷ್ಟೆ ಖುಷಿಯಾಗಿದ್ರು ಅವರಿಗೆ ನೆಮ್ಮದಿ ಮನಸ್ಸಿನ ಸಂತೋಷ ಯಾವಾಗಲೂ ತವರು ಮನೆಯಲ್ಲಿನೆ ಸಿಗೋದು. ಅವರಿಗೂ ಅವರ ಸಹೋದರರು ಅಂದರೆ ನಮ್ಮ ಮಾವಂದಿರು ಜೊತೆ ಕೂತು ಹರಟೆ ಹೊಡೆಯುವ ಆಸೆ. ಅವರ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು ಸೋದರ ಸೋದರಿಯರ ಕಾಲೆಳೆದು ಕಿಚಾಯಿಸುತ್ತಾ ಜೋರಾಗಿ ಕಂಬನಿ ಮಿಡಿಯುವವರೆಗು ನಗುವ ಸಂಭ್ರಮ.  ಇನ್ನು ನಮಗೆ ಬೇಸಿಗೆ ಅಂದ್ರೆನೆ ಖುಷಿ ಅದರಲ್ಲೂ ಅಮ್ಮನ ಮನೆ ಖುಷಿಗೆ ಪಾರವೆ ಇಲ್ಲಾ. ಏಪ್ರಿಲ್ ೧೦ ನಮ್ಮ ಫಲಿತಾಂಶ ಬರುವ ದಿನ ಮರುದಿನ ಅಮ್ಮನ ಊರಿನ ಬಸ್ ಹತ್ತುವ ದಿನ  ನನ್ನ ತಾಯಿ ನಮ್ಮ ಬಟ್ಟೆಗಳನ್ನು ಬ್ಯಾಗ್ ಗೆ ಹಾಕಿ ಅದರಲ್ಲೂ ವಿಶೇಷ ಬಟ್ಟೆ ಬೇರೆ ದಿನಾ ತೊಡುವ ಬಟ್ಟೆ ಬೇರೆ, ನಂತರ ತನ್ನ ಒಂದೆರಡು ಸೀರೆ ರವಿಕೆಗಳನ್ನು ಅದರ ಜೊತೆ ಸೇರಿಸುವವಳು. ಇದೆಲ್ಲಾ ತಯಾರಿ ಒಂದೆರಡು ವಾರದ ಮುಂಚೆನೆ ಶುರುವಾದ್ರು ದಡ ಸೇರೋದು ಊರಿಗೆ ಹೊರಡುವ ಹಿಂದಿನ ದಿನವೇ.  ಈ ಕಡೆ ನಾವು ಬಸ್ ಹತ್ತಿದ್ವಿ ಆ ಕಡೆ ನಮ್ ಚಿಕ್ಕಮ್ಮ ತಮ್ಮ ತಂಗಿನೂ ಹತ್ತಿದ್ರು ಉಳಿದವರೆಲ್ಲ ಜಾತ್ರೆ ಹಿಂದಿನ ದಿನ ಬರೋರು ಆದ್ರೆ ನಮಗೆ ಅಮ್ಮನ ಮನೆ ತಿಂಗಳ ಠಿಕಾಣ.  ಊರು ಬಂತು ಬಸ್ ಇಂದ ಇಳಿದು ನಿಂತ್ವಿ ದಾರಿ ಕಾದು ನೋಡುತ್ತಿದ್...

ಸಣ್ಣ ಕಥೆ ೧ - ಅಪರಿಚಿತರು ಅರ್ಥಮಾಡಿಕೊಂಡಾಗ

 90ರ ದಶಕದ ಆಸುಪಾಸಿನ ಸಣ್ಣ ಸಂದರ್ಭ: ಸುಲೋಚನಾ ಗಾರ್ಮೆಂಟ್ ನಲ್ಲಿ ಕೆಲಸ ಮಾಡುವ ಸ್ವಾವಲಂಬಿ ಮಹಿಳೆ, ದಿನಾಲೂ ಸರ್ಕಾರಿ ಬಸ್ ನಲ್ಲಿ ಊಟದ ಡಬ್ಬಿ ಜೊತೆ ಬರುವವಳು. ಅದು ಮುಂಗಾರಿನ ಕಾಲ ಜಿಟಿ ಜಿಟಿ ಮಳೆ, ಸುಲೋಚನಾಳ ಕೊಡೆ ಸರಳವಾಗಿ ಬಿಚ್ಚುತ್ತಿರಲಿಲ್ಲ, ಅದರ ಜೊತೆ ಸೆಣಸಾಟ ನಡೆಸಿದ್ದಾಗ.. ಬಸ್ ನಿಲ್ದಾಣದ ಎದುರಿನ ಚಹಾದ ಅಂಗಡಿಯ ಟೇಪ್ ರೆಕಾರ್ಡರ್ ನಲ್ಲಿ ಹಾಡು ಪ್ರಸಾರಿಸುತ್ತಿತ್ತು ಗೆಳೆಯರೊಂದಿಗೆ ಚಹಾ ಕುಡಿಯುತ್ತಾ ಅಲ್ಲೇ ನಿಂತಿದ್ದ ಪ್ರಕಾಶ್ ಸ್ವಲ್ಪ ಜೋರು ವ್ಯಕ್ತಿ, ಮ್ರೃದು ಮನಸ್ಸು ಸದಾ ಸ್ನೇಹ ಬಯಸುವ ಜೀವ. ಉದ್ದ ಹೆಣೆದಿರುವ ಜಡೆ, ಮಧ್ಯೆ ಬೈತಲೆ, ಅಗಲವಾದ ಕೆಂಪು ಬೊಟ್ಟು, ನೀಳ ರವಿಕೆ, ಖಾದಿ ಸೀರೆ ಜೊತೆಗೆ ಕವಿಗಳ ಚೀಲ, ಕೊಡೆ ಹಿಡಿದು ಬಸ್ ಗಾಗಿ ಕಾಯುತ್ತಾ ನಿಂತಿದ್ದ ಸುಲೋಚನಾ ಪ್ರಕಾಶ್ ಕಣ್ಣಿಗೆ ಬಿದ್ದಳು   ರಸ್ತೆ ದಾಟಿ ಬಂದ ಪ್ರಕಾಶ್ ನಿಮ್ಮ ಹೆಸರು ಏನೆಂದು ಕೇಳಿ ಅವಳ ಜೊತೆ ಸಂಭಾಷಣೆಗೆ ಪ್ರಯತ್ನಿಸಿದ ಆದರೆ ವ್ಯರ್ಥ ವಾಯಿತು  ಸುಲೋಚನಾಳ ಸರಳ ಸ್ವಭಾವ ಸ್ವಾವಲಂಬತೆ ಹಾಗೂ ಮುಗ್ದತೆ ಪ್ರಕಾಶ್ ನ ಸೆಳೆದಿತ್ತು, ಆ ಕ್ಷಣವೇ ಅವಳ ಜೊತೆಗಿನ ಸ್ನೇಹಕ್ಕಾಗಿ ಬಯಸುತ್ತಿದ್ದ  *ಬಹುಶಃ ಒಂದಿಷ್ಟು ಸ್ನೇಹಬಂದ ಮೌನದಿಂದ ಶುರುವಾಗಿ ನಂತರ ಗಟ್ಟಿಯಾಗುತ್ತವೆ*. ಮರುದಿನ ಅದೇ ಸಂದರ್ಭ ಅದೇ ಮಾತು, ಮೌನ. ಮಾರನೆ ದಿನ ಅದೇ ಸಂದರ್ಭ ಆದರೆ ಸುಲೋಚನಾಳೇ ಪ್ರಕಾಶ್ ನನ್ನ ಕರೆದು ತನ್ನ ಹೆಸರಿನಿಂದಲೇ ಪರಿಚಯ ಮಾಡಿಕೊಂಡಳು ...