ಮಗನ ಮದುವೆ

 (ಇದು ಸಣ್ಣ ಸಂದರ್ಭದ ಕಥೆ , ಹಳ್ಳಿಯಲ್ಲಿ ಬದುಕು ಕಟ್ಟಿಕೊಂಡಿರುವ ನಾಲ್ಕು ಜನ ಇರುವ ಒಂದು ಪುಟ್ಟ ಸಂಸಾರದ ಕಥೆ ಇದು)

ಅಕಿ ಎನ್ ಸಾಲಿ ಕಲ್ತಕಿ ಅಲ್ಲಾ ನಾಲ್ಕ ಮಂದ್ಯಾಗ ಜೋರ್ ಮಾತಡದಾಕಿನು ಅಲ್ಲಾ ತಾನ್ ತನ್ನ ಸಂಸಾರ ಅಂತ್ ಇದ್ಲು

ಗಂಡನು ತಕ್ಕಮಟ್ಟಿಗೆ ದುಡಿತಿದ್ದ ಚೀಲ ಗೀಲ ಹೊತ್ತು, ಒಂದು ಎಕರೆ ಅಷ್ಟ್ ಹೊಲನು ಇತ್ತು ಸುಗ್ಗಿ ಬಂದಾಗ ಕಾಳು ಕಡಿ ಬೆಳ್ದ ಚೂರು ಮನಿಗೆ ಇಟ್ಕೊಂಡ್ ಉಳ್ದಿದ್ದು ಮಾರಿ ಅಷ್ಟ ಇಷ್ಟಾ ಬಂದಿದ್ರಾಗ ಕೂಡಿ ಇಟ್ಕೊಂಡ್ ಅದರಾಗ ದುಡಿದು ಜೀವನಾ ಸಾಗಸ್ತಿದ್ರು, ಒಬ್ಬ ಮಗ ಒಬ್ಬಕಿನ ಮಗಳ ಇಬ್ರುನೂ ಸರ್ಕಾರಿ ಸಾಲ್ಯಾಗ ಪಿಯುಸಿತನ ಕಲ್ಸ್ಯಾರ

ಮುಂದ ಕಲಸಾಕ ಶಕ್ತಿಇಲ್ಲಪಾ ನಂಗ ಮನಿ ಹೊಲ ನೋಡ್ಕೋಂಡ ಹೋಗ್ ನೀನ ಅಂತ ಅಪ್ಪ ಹೇಳಿದ ಮಾತಿಗೆ ಹು ಅಂದಿದ್ದ ಮಗ, ಮಗಳ್ನು ಚಲೋ ಮನಿಗೆ ಕೊಟ್ಟ ಮದವಿ ಮಾಡಿದ್ರು ಅಷ್ಟ ಇಷ್ಟಾ ಕೂಡಿಟ್ಟಿದ್ದ ರೊಕ್ಕಕ್ದಾಗ 

ಮಗಳ ಎನ ಕೊಟ್ಟ ಮನಿಗೆ ಹೊದ್ಲು ಅನ್ನುದ್ರಾಗ ಚಿಂತಿ ಹತ್ತಿದ್ ಅವ್ವ ಇನ್ನ ಮಗಗ ಒಂದ್ ಮದುವಿ ಮಾಡಿದ್ರ ಅಪ್ಪ ಅವ್ವ ಆಗಿ ಕರ್ತವ್ಯ ಆತ್ ನೋಡ್ ನಮ್ದು ಅಂತ ಅನ್ಕೊಂಡು ಊರಾಗ ಬಿಗತನಾ

ಮಾಡರಕಡೆ ಮಗನ ಬಗ್ಗೆ ಹೊಲ ಮನಿ ಆಸ್ತಿ ಬಗ್ಗೆ ಹೇಳಿ ಇಟ್ಟಿದ್ಲು,

 ಇವನರ ಸಾಲಿ ಕಲ್ತಿಲ್ಲ ಒಕ್ಕಲುತನ ಮಾಡವ ಆಸ್ತಿ ಗಿಸ್ತಿನು ಇಲ್ಲ ಕನ್ನೆ ಕೊಡೋರು ವಿಚಾರ ಮಾಡ್ತಾರ ಅಂತ ಚಿಂತ್ಯಾಗ ಇದ್ದಕಿಗೆ ಜಲ್ದಿನ ಕನ್ನೆ ಸಿಕ್ಕ ಮದುವಿನು ನಿಚ್ಚಿ ಆಗುತ್ತ ಅನ್ನುದು ಕನಸೋ ಮನಸ್ದಾಗು ಇದ್ದಿಲ್ಲ ಅಕಿಗೆ

ಅಂತಾಕಿಗೆ ಮತ್ತ್ ಚಿಂತಿ ಹತ್ಲಾರದಾ ಇರುತ್ತಾ ಮಗನ ಮದವಿದ ದಿಗಿಲ ಬಡ್ದರಂಗ ಮನಿ ಮುಂದ ಕಟ್ಟಿ ಮ್ಯಾಲೆ ಕುಂತಿದ್ಲ. 

ಹೊಲದಾಗಿಂದ ಮನಿಗಿ ಬಂದು ಮಗಾ "ಯವ್ವಾ ಚಿಂತಿ ಮಾಡಬ್ಯಾಡ ಮದುವಿದ, ಊರಿನ ಗುಡ್ಯಾಗ ಮಾಡಿದ್ರ ಆತ್ ಗುಡಿವ ಸಾಮಾನ ಅದಾವು ಎಲ್ಲಾ ಅಡಗಿದು ಬಂತು, ಮಂಟಪ್ದು ಹೇಳಿದ್ರ ಮಾಡಿಕೊಡ್ತಾರ ಜಾಗನು ಐತಿ ಹೆಣ್ಣಿನರು ಬಾಳಾ ಮಂದಿ ಎನ್ ಬರಲ್ಲ ಮನಿ ಮಂದಿ ಅಷ್ಟ ಬಿಟ್ರ ಊರಾಗಿನ ಹಿರಿಯರು ಸಾಕು ಮದುವಿಗಿ" ಅಂದ.

ಆತ್ ಪಾ ನಿ ಹೇಳ್ದಂಗ ಆಗ್ಲಿ ನಾಳಿನ ಒಂದ್ ಚೀಲ ಜ್ವಾಳನ ಗಿರಣಿಗಿ ಹಾಕಸ್ಕೊಂಡು ಬಾ ಹಿಟ್ಟ ಹಾಕ್ತೀನಿ ಓಣ್ಯಾಗ ಮದುವಿಗಿ ರೊಟ್ಟಿ ಆಕ್ಕಾವ ಚಪಾತಿಗೆ ಗೋಧಿ ಹಿಟ್ಟ , ಹೆಸರುಕಾಳ್ ಪಲ್ಲೆಕ ಕಾಳು ಅದಾವ ಇನ್ನ ಬುಂದೆ ಅನ್ನ ಸಾರ ಅಲ್ಲೆ ಗುಡ್ಯಾಗ ಮಾಡ್ತಾರ ಶೇಂಗಾ ಪುಡಿ ಮಸರ ಒಂದ್ ಆದ್ರ ಊಟದ ಬಗೆಹರಿತೆತಿ...

ನಾವೆನ ಗುಂಜಿ ಬಂಗಾರನು ಹಾಕಿಲ್ಲ ಹುಡಿಗಿಗೆ ಅವರು ಕಡೆ ರೊಕ್ಕ ಪಕ್ಕ ಕೇಳಬ್ಯಾಡ್ರಿ, ಮದುವಿ ಬಟ್ಟಿ ಪೂಜೆ ಸಾಮಾನ ಅಲ್ಲಾ ಅಷ್ಟಕ ಕೂಡಿಟ್ಟಿದ್ದ ಒಂದಿಸ ಅದಾವ ರೊಕ್ಕ ಕಡಿಮಿ ಬಿದ್ರ ಸಂಘದಾಗ ಸಾಲ ತಗೋಳಾಕ ಬರುತ್ತ,

ನಿಮ್ಮ ಅಪ್ಪಗ ಅಡಗಿದ ಕೊಟ್ಟುಬಿಡ ಮಂದಿ ಕರಕೊಂಡ ಮಾಡಸ್ತಾನ ನಿಮ್ಮಕ್ಕನ ಮಾವನ ಕರದ ಬಾ ಅಳಿಯರ ಶಾಸ್ತ್ರ ಮಾಡ್ತಾರ ಛಲೋ ಬಟ್ಟಿ ಹಾಕಸಬೇಕ ಅವರಿಗೂ 

ಇಷ್ಟು ಆದ್ರ ಒಂದ ಲೆಕ್ಕಕ್ಕ ಚಿಂತಿ ಇರಲ್ಲ ಅಂದ್ಲು.

ಮದುವಿ ದಿನ ಸಮೀಪ ಬಂದಂಗೆಲ್ಲಾ ಚಿಂತಿ ಜೊತಿ ಸ್ವಲ್ಪ ಅಂಜಿಕಿನು ಇತ್ತು ಮರ್ಯಾದಿ ಪ್ರಶ್ನೆ ಬರಬಾರದ ಅಂತ 

ಹಂಗೂ ಹಿಂಗು ದಿನ ಕಳೆದ ಮದುವಿ ದಿನ ಬಂದ ಬಿಡ್ತು 

ಆ ಕಡೆ ಈ ಕಡೆ ಈಕಿ ಓಡ್ಯಾಡುದ್ರಾಗ ಇದ್ಲು ಆ ಕಡೆ ಅಕ್ಕಿ ಕಾಳ ಬಿದ್ದಿದ್ವು, ಮಗಳು ಈಕಿ ಕೂಡಿ ಹೋಗರನ ಬರೋರನ ವಿಚಾರಸಕೊಂಡ್ರು ಅತ್ತಾಗ ಅಳಿಯ ಅಪ್ಪ ಅದಾವ ಊಟದ ನೋಡಕೊಂಡ್ರು ಮದುವಿ ಹಿರಿಯರ ಊರಾನರ ಸಮ್ಮುಖದಾಗ ಸಂಪನ್ನ ಆಗಿದ್ದು ನೋಡಿ ಬಾಳ್ ನಿಟ್ಟುಸಿರು ಬಿಟ್ಲು ವರನ ಅವ್ವ.

ತಾಯಿ ಆದಕಿಗೆ ಚಿಂತಿ ಬಾಳಾ , ಚಿಂತಿ ಮಾಡ್ಕೊಂತನ ಎಲ್ಲಾ ಸಾಗಿಹಾಕಿ ಬಿಡ್ತಾಳ, ಅಕಿದ ಅಷ್ಟ ಶಕ್ತಿ ಅಷ್ಟ ತಾಳ್ಮೆ ನೋಡಿ ಕಲಿಯೋದು ಬಾಳಾ ಐತಿ ಅದು ಹೆಂಗ ಎಲ್ಲಾದ್ರಾಗು ನಿಪುಣತನ ಜಾಣ್ಮೆ ಸಹನೆ ದೇವರ ಸಮಾನ ಅಂದ್ರ ತಪ್ಪಾಗಲ್ಲ .

ಇದು ಬರೀ ಒಂದು ಸಂದರ್ಭ ತಾಯಿಯ ಜೀವನದಲ್ಲಿ.. ನಾವು ಆಕೆಗೂ ಒಂದು ಸ್ವಂತ ಜೀವನವಿದೆ ಅನ್ನುವುದನ್ನು ಮರೆತುಬಿಡುತ್ತೇವೆ

ಎಲ್ಲ ತಾಯಂದಿರು ಒಂದು ಅದ್ಬುತ ಶಕ್ತಿ, ಇಡೀ ಜಗತ್ತಿನಲ್ಲಿ ಅವರಂತ ಶ್ರೇಷ್ಠರು ಯಾರು ಇಲ್ಲ.



ಈ ಸಣ್ಣ ಕಥೆ ನಿಮ್ಮ ಮನಸ್ಸಿಗೆ ಮುದ ನೀಡಿದೆ ಎಂದು ಭಾವಿಸುತ್ತೇನೆ.

Comments

Post a Comment

Popular posts from this blog

ಎಲ್ಲಮ್ಮ ಗುಡ್ಡಕ್ಕ ಸವಾರಿ

ಸಣ್ಣ ಕಥೆ ೧ - ಅಪರಿಚಿತರು ಅರ್ಥಮಾಡಿಕೊಂಡಾಗ